Skip to main content

Hosa balina Hosilali nithiruva Hosa jodige shubhavagali

ಚಿತ್ರ : ಶ್ರಾವಣ ಬಂತು

ರಚನೆ : ಚಿ ಉದಯಶಂಕರ್

ಸಂಗೀತ  : ಎಂ.ರಂಗಾರಾವ್

ಅ..... ಅ......
ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ

ಆ ಸ್ವರ್ಗದ ಬಾಗಿಲು ತೆರೆದಿದೆ ಇಂದು, ಈ ಶುಭವೇಳೆಯಲಿ
ಆ ದೇವತೆಗಳು ಉಲ್ಲಸಲಿ ಬಂದರು , ನಿಮ್ಮನ್ನು ಹಾರುಸುತ್ತಿಲಿ
ಇದು ಬ್ರಹ್ಮನು ಬರೆದ ಅನುಬಂದ........
ಇದು ಬ್ರಹ್ನನು ಬರೆದ ಅನುಬಂದ, ಅನುರಾಗವು ನೀಡಲಿ ಆನಂದ.

ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ

ಈ ಹಚ್ಚನ ಹಸಿರಿನ ತೋರಣವು, ಸುಸ್ವಾಗತವೆಂದು ಹೇಳುತ್ತಿವೆ
ಈ ಮಂಗಳ ವಾದ್ಯವು ಮೊಳಗಿರಲು, ಶುಭ ಕಾರ್ಯವು ಸಂಭ್ರಮ ಕಾಣುತ್ತಿದೆ
ಜನಮ ಜನಮದ ಸ್ನೇಹವಿದು.......
ಜನಮ ಜನಮದ ಸ್ನೇಹವಿದು, ಸಂಸಾರದ ಬಾಳಿಗೆ ನಾಂದಿಯಿದು.

ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ

ಈ ಶ್ರಾವಣ ಮಾಸವು ತಂದು ಹುಡುಗೊರೆ, ಉಲ್ಲಾಸವ ತರಲಿ
ಆ ಮಂಜುನಾಥನ ಕೃಪಟಾಕ್ಷವು ಎಂದೆಂದು ನಿಮಗಿರಲಿ
ಒಂದೇ ವರಷದ ಅವಧಿಯಲಿ......
ಒಂದೇ ವರಷದ ಅವಧಿಯಲಿ ಹಸ ಕಂದನು ಮಡಿಲಲ್ಲಿ ನಗುತ್ತಿರಲಿ

 ಹೊಸ ಬಾಳಲಿ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ
ಹೊಸ ಆಸೆಯ ಕಡಲಲ್ಲಿ ತೇಲುತಿಹ ನವ ಜೋಡಿಗೆ ಶುಭವಾಗಲಿ

Comments